¡Sorpréndeme!

News Cafe | ವೈದ್ಯರ ಎಡವಟ್ಟು; 'ಅಂದ'ವನ್ನೇ ಕಳೆದುಕೊಂಡ ಯುವತಿ | HR Ranganath | June 18, 2022

2022-06-18 0 Dailymotion

ಬೆಂಗಳೂರಿನ ಜೆ.ಪಿ.ನಗರ ವಾಸಿಸುತ್ತಿರುವ ಯುವತಿ ಹಲ್ಲಿನ ಚಿಕಿತ್ಸೆಗೊಳಗಾಗಿ ಇದೀಗ ಮುಖ ಗುರುತು ಸಿಗದಂತೆ ಬದಲಾಗಿದೆ. ಜೆಪಿ ನಗರದ ಖಾಸಗಿ ಡೆಂಟಲ್ ಕ್ಲಿನಿಕ್‍ನಲ್ಲಿ ಡಾ.ಮಯೂರಿ ಬಳಿ ಚಿಕಿತ್ಸೆ ಪಡೆದಿದ್ದ ಯುವತಿ, ರಾತ್ರಿ ಮಲಗಿ ಬೆಳಗೆದ್ದ ಕನ್ನಡಿ ನೋಡಿಕೊಂಡಿದ್ದಾರೆ. ಆಕೆಯ ಮುಖ ಒಂದೇ ರಾತ್ರಿಗೆ ಗುರುತು ಸಿಗದಷ್ಟು ಮುಖ ಬದಲಾಗಿದೆ. ಇನ್ನೂ ಚಿಕಿತ್ಸೆ ವೇಳೆ ವೈದ್ಯರು ಯುವತಿಗೆ ಅನಸ್ತೇಷಿಯಾ ಬದಲು ಬೇರೊಂದು ಇಂಜೆಕ್ಷನ್ ಕೊಟ್ಟಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಆಸ್ಪತ್ರೆ ವೈದ್ಯರ ಬಳಿ ಯುವತಿ ಕೇಳಿದ್ದಕ್ಕೆ ಸರಿಹೋಗುತ್ತೆ ಅಂತ ಸಮಜಾಯಿಷಿ ಕೊಟ್ಟು ಕಳುಹಿಸಿದ್ದಾರೆ. ಆದ್ರೆ ಚಿಕಿತ್ಸೆ ಪಡೆದು ವಾರ ಕಳೆದ್ರು ಯುವತಿಯ ಮುಖ ಸರಿ ಹೋಗಿಲ್ಲ.. ಮತ್ತೆ ಹೋಗಿ ಕೇಳಿದ್ರೆ, ಚಿಕಿತ್ಸೆ ಕೊಟ್ಟಿದ್ದ ವೈದ್ಯರು ಇಲ್ಲಿ ಕೆಲಸ ಬಿಟ್ಟು ಮುಂಬೈಗೆ ಪರಾರಿಯಾಗಿರುವ ವಿಷಯ ತಿಳಿದಿದೆ. ಆದ್ರೆ ಆಸ್ಪತ್ರೆಯವರು ನಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸಿದ್ದಾರೆ.. ಇದರಿಂದ ರೋಸಿ ಹೋದ ಯುವತಿ ವಕೀಲರೊಬ್ಬರನ್ನು ಸಂಪರ್ಕಿ ಕಾನೂನು ಹೋರಾಟ ಮಾಡೋಕೆ ಮುಂದಾಗಿದ್ದಾಳೆ.. ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಆಸ್ಪತ್ರೆಗೆ ನೋಟಿಸ್ ನೀಡೋಕೆ ಸಿದ್ದತೆ ನಡೆಸಿದ್ದಾರೆ.

#publictv #newscafe #hrranganath